ನಮ್ಮ ಈ ಕಾನೂನು ಕಾಲೇಜಿನ ೩ನೇ ಮಹಡಿಯಲ್ಲಿ ಸುಸಜ್ಜಿತವೇ ಅಲ್ಲದೆ, ಸರ್ವಸಜ್ಜಿತ ಎಂದು ಹೇಳಬಹುದಾದ ಗ್ರಂಥಾಲಯವನ್ನು ಹೊಂದಿದೆ ಎಂದು ಹೇಳಬಹುದು. ಉದಾಹರಣೆಗೆ ಈ ನಮ್ಮ ಗ್ರಂಥಾಲಯದಲ್ಲಿ ಗಣಕೀಕೃತ ಅಕರ ಮಾಹಿತಿ, ಅಂತರ್ಜಾಲ, ಸಿಸಿಟಿವಿಯ ಕಣ್ಗಾವಲು, ವೈ-ಫೈ ತಂತ್ರಜ್ಞಾನದಂತಹ ಸೌಲಭ್ಯಗಳನ್ನು ಹೊಂದಿದೆ. ಇದು ವಿದ್ಯಾರ್ಥಿಗಳೇ ಅಲ್ಲದೆ ಬೋಧನಾ ಸಿಬ್ಬಂದಿ ವರ್ಗಕ್ಕೂ ಓದಲು ಅನುವಾಗುವ ಉತ್ತಮ ವಾತಾವರಣವನ್ನು ಸೃಷ್ಟಿಸಿದೆ.
ನಮ್ಮ ಗ್ರಂಥಾಲಯದಲ್ಲಿನ ಸಂಗ್ರಹವು ಅತ್ಯುಪಯುಕ್ತ ಪುಸ್ತಕಗಳನ್ನು ಒಳಗೊಂಡಿದೆ. ಉದಾಹರಣೆಗೆ,ಲೋಕಸಭಾ ಸಚಿವಾಲಯದಿಂದ ಪ್ರಕಟಗೊಂಡಿರುವ, ಧರ್ಮಶಾಸ್ತ್ರದ ಇತಿಹಾಸ, ಕಾರ್ಲ್ ಮಾರ್ಕ್ಸ್ ದಾಸ್ ಕ್ಯಾಪಿಟಲ್, ಸಾಂವಿಧಾನಿಕ ವಿಧಾನ ಸಭೆಗಳ ಚರ್ಚೆಗಳು ಇತ್ಯಾದಿ.
ಕಾಲೇಜು ಸುಸಜ್ಜಿತವಾದ ಅಣಕು ನ್ಯಾಯಾಲಯ ಸಭಾಂಗಣವನ್ನು ಹೊಂದಿದೆ. ವಕಾಲತ್ತಿನ ಕೌಶಲ್ಯವನ್ನು ಪ್ರೋತ್ಸಾಹಿಸಲು ಮತ್ತು ವಿದ್ಯಾರ್ಥಿಗಳು ವಾದಗಳಲ್ಲಿ ತರಬೇತಿ ನೀಡಲು, ಅಣಕು ನ್ಯಾಯಾಲಯ ಸ್ಪರ್ಧೆಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಕಾಲೇಜಿನ ಅಣಕು ನ್ಯಾಯಾಲಯದ ಸಮಿತಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಲ್ಲದೆ, ಆಯ್ಕೆ ಸುತ್ತನ್ನು ನಡೆಸುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಕಳುಹಿಸಲಾಗುವುದು. ಅಣಕು ಪ್ರಯೋಗಗಳು, ಗ್ರಾಹಕ ಸಮಾಲೋಚನೆಯ ಸಭಾವಧಿಗಳನ್ನು ಅಣಕು ನ್ಯಾಯಾಲಯ ಸಭಾಂಗಣದಲ್ಲಿ ವಿದ್ಯಾರ್ಥಿಗಳ ವಕೀಲೀ ಕೌಶಲವನ್ನು ಉತ್ಕೃಷ್ಟಗೊಳಿಸಲು ನಡೆಸಲಾಗುವುದು.
ನಮ್ಮ ವಿದ್ಯಾರ್ಥಿಗಳು ವಿವಿಧ ಅಣಕು ನ್ಯಾಯಾಲಯ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಗೆದ್ದಿದ್ದಾರೆ ಸಹ. ಉದಾಹರಣೆಗೆ, ಅತ್ಯುತ್ತಮ ಮಹಿಳಾ ವಕೀಲೆ, ಅತ್ಯುತ್ತಮ ಅಣಕುಗಾರ (ಮೂಟರ್), ಇತ್ಯಾದಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ ನಮ್ಮ ವಿದ್ಯಾರ್ಥಿಗಳು.
ಕಾಲೇಜು ನಿಯಮಿತವಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನೂ ನಡೆಸುತ್ತದೆ, ಇದರಲ್ಲಿ ಭಾರತದ ಎಲ್ಲ ಭಾಗಗಳ ಸ್ಪರ್ಧಿಗಳು ಭಾಗವಹಿಸುವರು. ಸ್ಪರ್ಧಾ ವಿಜೇತರ ನಿರ್ಣಯಕ್ಕೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಆಹ್ವಾನಿಸಲಾಗುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ.
ಅಂತರ್ಜಾಲ ಸೌಲಭ್ಯಗಳೊಂದಿಗೆ ಸುಸಜ್ಜಿತವಾದ ಗಣಕಯಂತ್ರ (ಕಂಪ್ಯೂಟರ್) ಪ್ರಯೋಗಾಲಯವನ್ನು ನಮ್ಮ ಕಾನೂನು ಕಾಲೇಜಿನಲ್ಲಿ ಹೊಂದಿದ್ದೇವೆ, ವೈ-ಫೈ ಸಂಪರ್ಕ ಮತ್ತು ಆನ್‌ಲೈನ್ ಮುಖಾಂತರ ಕಾನೂನು ಜರ್ನಲ್‌ಗಳನ್ನು ಪಡೆದು ಅಭ್ಯಸಿಸಿ ವಿದ್ಯಾರ್ಥಿಗಳು ಜ್ಞಾನವೃದ್ಧಿಸಿಕೊಳ್ಳಲು ಅನುವಾಗುವಂತೆ ಮತ್ತು ಪ್ರಚಲಿತ ವಿದ್ಯಮಾನಗಳನ್ನೂ ಅರಿತು, ಮತ್ತು ನಿಯತಕಾಲಿಕಗಳಲ್ಲಿನ ಲೇಖನಗಳನ್ನು ಅವರು ಓದುವುದಲ್ಲದೆ ನವೀಕರಿಸಿದ ನಿಯತಕಾಲಿಕಗಳಿಗೆ ಲೇಖನಗಳನ್ನು ಬರೆಯುವ ಬಗ್ಗೆಯೂ ಅವರನ್ನು ತಯಾರುಗೊಳಿಸಲಾಗುತ್ತದೆ.
ನಮ್ಮಲ್ಲಿರುವ ಎಲ್ಲ ಅಧ್ಯಾಪಕರುಗಳಿಗೆ ಪ್ರತಿ ವರ್ಷವೂ ನವೀಕರಿಸಲಾಗುವ ಆರೋಗ್ಯ ವಿಮಾ ಯೋಜನೆಯು ಜಾರಿಯಲ್ಲಿದೆ.