ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಕಾಯಿದೆಯೊಂದರ ಮೂಲಕ ಸ್ಥಾಪಿಸಲಾದ ಅಥವಾ ಮಾನ್ಯತೆ ಹೊಂದಿದ ಸಮಾನವಾದ ರಾಷ್ಟ್ರೀಯ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯವೆಂದು ಪರಿಗಣಿತ ಅಥವಾ ಭಾರತೀಯ ವಿಶ್ವವಿದ್ಯಾಲಯದ ಸ್ಥಾನಮಾನಕ್ಕೆ ಸಮಾನವೆಂದು ಸಮರ್ಥ ಪ್ರಾಧಿಕಾರದಿಂದ ಗುರುತಿಸಲ್ಪಟ್ಟ ವಿದೇಶಿ ವಿಶ್ವವಿದ್ಯಾಲಯದಿಂದ ಯಾವುದೇ ಜ್ಞಾನ ವಿಭಾಗದಲ್ಲಿ ಪದವಿ ಪಡೆದ ಅರ್ಜಿದಾರ, ಕಾನೂನಿನಲ್ಲಿ ೩ ವರ್ಷಗಳ ಎಲ್ಎಲ್.ಬಿ ಪದವಿ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು.ಈ ಕೋರ್ಸ್‌ನ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಯು ಮೇಲೆ ತಿಳಿಸಿರುವ ರೀತ್ಯ ಗುರುತಿಸಿರುವ ಯಾವುದೇ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳಲ್ಲಿ ಕನಿಷ್ಠ ಶೇಕಡಾ ೪೫% ಅಂಕಗಳನ್ನು ಪಡೆದಿರಬೇಕು. ಎಸ್ಸಿ ಮತ್ತು ಎಸ್ಟಿ ಅರ್ಜಿದಾರರಿಗೆ ಕನಿಷ್ಟ ಅಂಕ ೪೦%.
ಅರ್ಹ ವಿದ್ಯಾರ್ಥಿಯು ೧೦+೨+೩ ಮಾದರಿಯ ಅಧ್ಯಯನವನ್ನು ಪೂರೈಸಿರಬೇಕು.
ಮೀಸಲಾತಿ: ಎಸ್ಸಿ/ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಸರ್ಕಾರದ ನಿರ್ದೇಶನದಂತೆ ಕಾಲಕಾಲಕ್ಕೆ ಜಾರಿಯಲ್ಲಿಡಲಾಗುವುದು.
ಪರೀಕ್ಷೆಯ ಪ್ರತಿ ಪತ್ರಿಕಾ ವಿಷಯಕ್ಕೆ ೮೦ + ೨೦ ಅಂಕಗಳ ಸೂತ್ರ ಅನ್ವಯವಾಗುತ್ತೆ. ವಿಶ್ವವಿದ್ಯಾಲಯದ ನಿಯಮದನುಸಾರ, ೮೦ ಅಂಕಗಳ ಪರೀಕ್ಷಾಪತ್ರಿಕೆ ೩ ಗಂಟೆಗಳ ಅವಧಿಯದಾಗಿದ್ದು, ೨೦ ಅಂಕಗಳನ್ನು ಕಾಲೇಜಿನ ಆಂತರಿಕ ಮೌಲ್ಯಮಾಪನವಕ್ಕೆ ಒಳಪಡಿಸಿ ನೀಡಲಾಗುವುದು.
ಯಾವುದೇ ವಿದ್ಯಾರ್ಥಿಯು ಪ್ರತಿ ಸೆಮಿಸ್ಟರ್‌ನ ಪ್ರತಿ ಪತ್ರಿಕೆಯ ಪರೀಕ್ಷೆಯಲ್ಲಿಯೂ ಕನಿಷ್ಠ ೪೦% ಅಂಕಗಳನ್ನು ಪಡೆಯದಿದ್ದಲ್ಲಿ, ಅಂತಹ ವಿದ್ಯಾರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುವುದಿಲ್ಲ.
ಮೇಲೆ ನಮೂದಿಸಿರುವ ಕನಿಷ್ಟ ಅಂಕಗಳನ್ನು, ಎಲ್ಲಾ ಸೆಮಿಸ್ಟರ್‌ಗಳ ಪರೀಕ್ಷೆಯಲ್ಲಿ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಕೆಳಗೆ ನಮೂದಿಸಿರುವ ಶ್ರೇಯಾಂಕದನುಸಾರ ನೀಡಲಾಗುವುದು.