ಪದವಿ ಪೂರ್ವ ವಿಶ್ವವಿದ್ಯಾಲಯದ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಥವಾ ಅದಕ್ಕೆ ತತ್ಸಮಾನ ಕೋರ್ಸ್ (+೨) ಅಥವಾ ಸಮಾನವಾದ (೧೧+೧, ಹಿರಿಯ ಶಾಲೆ ಬಿಡುವ 'A' ಮಟ್ಟ ಪ್ರಮಾಣಪತ್ರ ಕೋರ್ಸ್) ಭಾರತದ ಸರ್ಕಾರದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಅಥವಾ ಹೈಯರ್ ಸೆಕೆಂಡರಿ ಬೋರ್ಡ್ ಅಥವಾ ತತ್ಸಮಾನ ಒಕ್ಕೂಟದಿಂದ ಸ್ಥಾಪಿತವಾದ ಅಥವಾ ಅಂಗೀಕೃತವಾದ ಅಥವಾ ರಾಜ್ಯದಿಂದ ನೀಡಲಾಗಿರುವ ಅಥವಾ ಈ ಉದ್ದೇಶಕ್ಕಾಗಿ ಬೇರೆ ದೇಶದ ಸರ್ಕಾರ ನೀಡುವ ಕೋರ್ಸ್ ನ ಅರ್ಹತಾ ಪ್ರಮಾಣಪತ್ರದನುಸಾರ ಕೋರ್ಸ್‌ಗೆ ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಬಹುದು ಮತ್ತು ಪ್ರವೇಶ ಪಡೆಯಬಹುದು.
ಕಾನೂನು ಕೋರ್ಸ್‌ಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ಕೇಂದ್ರ ಅಥವಾ ಶಿಕ್ಷಣ ಪ್ರಾಧಿಕಾರಗಳಿಂದ ಗುರುತಿಸಲ್ಪಟ್ಟ ಶಾಲಾ ಶಿಕ್ಷಣದ ೧೦+೨ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.
ರಾಜ್ಯ ಸರ್ಕಾರಗಳು ಮತ್ತು ಬಾರ್ ಕೌನ್ಸಿಲ್ ಆಫ಼್ ಇಂಡಿಯಾ ನಿಗದಿಪಡಿಸಿದ ೧೦+೨ ಕೋರ್ಸ್ ಗೆ ಸಮನಾದ ಶೈಕ್ಷಣಿಕ ಅರ್ಹತೆಗಳನ್ನು ಪರಿಗಣಿಸಲಾಗುತ್ತದೆ. ನಿಗದಿತ ಶಾಲಾ ಶಿಕ್ಷಣ ಕಾರ್ಯಕ್ರಮದನ್ವಯದ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ ೪೫ ಶೇಕಡಾ ಅಂಕಗಳನ್ನು ಪಡೆದುಕೊಂಡಿರಬೇಕು.
ಅರ್ಹತಾ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಒಟ್ಟು ಅಂಕಗಳು ಕನಿಷ್ಠ ಶೇಕಡಾವಾರು ೪೫% ಅಂಕಗಳಿಗಿಂತ ಕಡಿಮೆ ಇರಬಾರದು. ಎಸ್ಸಿ & ಎಸ್ಟಿ ಯ ಅಭ್ಯರ್ಥಿಗಳಿಗೆ ಒಟ್ಟು ಅರ್ಹತಾ ಅಂಕಗಳು ೪೦%.
ಮೀಸಲಾತಿ: ಎಸ್ಸಿ/ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಸರ್ಕಾರದ ನಿರ್ದೇಶನದಂತೆ ಕಾಲಕಾಲಕ್ಕೆ ಜಾರಿಯಲ್ಲಿಡಲಾಗುವುದು.
ಪರೀಕ್ಷೆಯ ಪ್ರತಿ ಪತ್ರಿಕಾ ವಿಷಯಕ್ಕೆ ೮೦ + ೨೦ ಅಂಕಗಳ ಸೂತ್ರ ಅನ್ವಯವಾಗುತ್ತೆ. ವಿಶ್ವವಿದ್ಯಾಲಯದ ನಿಯಮದನುಸಾರ, ೮೦ ಅಂಕಗಳ ಪರೀಕ್ಷಾಪತ್ರಿಕೆ ೩ ಗಂಟೆಗಳ ಅವಧಿಯದಾಗಿದ್ದು, ೨೦ ಅಂಕಗಳನ್ನು ಕಾಲೇಜಿನ ಆಂತರಿಕ ಮೌಲ್ಯಮಾಪನವಕ್ಕೆ ಒಳಪಡಿಸಿ ನೀಡಲಾಗುವುದು.